ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಠದ ಆಸ್ತಿ ಕರಗಲು ಶರಣರೇ ಕಾರಣ

ಎಸ್.ಕೆ.ಬಸವರಾಜನ್‌ ಆರೋಪ
Last Updated 28 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಚಿತ್ರದುರ್ಗ: ‘ಮುರುಘಾಮಠದಲ್ಲಿ ಆಡಳಿತಾ­ಧಿ­ಕಾರಿ­ಯಾಗಿದ್ದ ವೇಳೆ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಯನ್ನು ಉಳಿಸಿದ್ದೇನೆ. ಈ ಉಳಿಸಿದ ಆಸ್ತಿಯನ್ನು ಶಿವಮೂರ್ತಿ ಮುರುಘಾ ಶರಣರು ಮಾರಾಟ ಮಾಡಿ ಕಳೆದಿದ್ದಾರೆ. ಹೀಗಿದ್ದೂ ವಿನಾ ಕಾರಣ ಆಸ್ತಿ ಮಾರಾಟ ವಿವಾದದಲ್ಲಿ ನನ್ನ ಹೆಸರನ್ನು ಬಳಸಿದ್ದಾರೆ’ ಎಂದು ಮುರುಘಾ ಮಠದ ಮಾಜಿ ಆಡಳಿತಾಧಿಕಾರಿ, ಮಾಜಿ ಶಾಸಕ ಎಸ್.ಕೆ. ಬಸವರಾಜನ್ ಆರೋಪಿಸಿದರು.

ಆಸ್ತಿ ಮಾರಾಟದ ದಾಖಲೆಗಳನ್ನು ಪತ್ರಿಕಾಗೋಷ್ಠಿಯಲ್ಲಿ ಪ್ರದರ್ಶಿಸಿ, ಶರಣರು ತಮ್ಮ ಮೇಲೆ ಮಾಡಿದ ಆರೋಪಗಳಿಗೆ ತೀಕ್ಷ್ಣವಾಗಿ ಪ್ರತಿಕ್ರಿ ಯಿಸಿದರು. ಬೆಂಗಳೂರಿನ ಗಾಂಧಿ ನಗರದ ಕಾನಿಷ್ಕ ಹೋಟೆಲ್ ಪಕ್ಕದಲ್ಲಿದ್ದ ಮಠಕ್ಕೆ ಸೇರಿದ ರೂ 23.5 ಸಾವಿರ ಚದರಡಿ ಆಸ್ತಿಯನ್ನು ಶರಣರು ಸರ್ಕಾ ರಕ್ಕೆ ರೂ 63.50 ಕೋಟಿ ಬೆಲೆಗೆ ಮಾರಾಟ ಮಾಡಿದ್ದಾರೆ. ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಮಾಜಿ ಸಚಿವ ಮುರುಗೇಶ್ ನಿರಾಣಿ, ಐಎಎಸ್ ಅಧಿಕಾರಿ ದ್ಯಾಬೇರಿ ಅವರು ಉಪಸ್ಥಿತಿ ಯಲ್ಲಿ ಮಾರಾಟ ಪ್ರಕ್ರಿಯೆ ನಡೆದಿದೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತನಿಖೆ ನಡೆಸ­ಬೇಕು. ಇಲ್ಲದಿದ್ದಲ್ಲಿ  ತಾವು ಈ ಸಂಬಂಧ ಹೈಕೋರ್ಟ್‌ನಲ್ಲಿ ದಾವೆ ಹೂಡು ವುದಾಗಿ ಹೇಳಿದರು.

‘ಬೆಂಗಳೂರಿನ ಕೆಂಗೇರಿ ಹೋಬಳಿ ಸೂಲೀಕೆರೆ ಗ್ರಾಮ, ದಾವಣಗೆರೆ ನಗರ ಪಿ.ಬಿ.ರಸ್ತೆಯ ಜನತಾ ಹೋಟೆಲ್ ಪಕ್ಕದ ನಿವೇಶನ, ಹಾವೇರಿ ನಗರದಲ್ಲಿ 21 ಎಕರೆ 12 ಗುಂಟೆ, ಹೊಸದುರ್ಗ ಪಟ್ಟಣದ ಎಸ್‌ಜೆಎಂ ಬಡಾವಣೆಯ 25 ನಿವೇಶನ, ಚಿತ್ರದುರ್ಗದ ಶಂಕರ್ ಟಾಕೀಸ್, ಚಂದ್ರವಳ್ಳಿ ಎಸ್‌ಜೆಎಂ ಪಕ್ಕದ 64 ಸಾವಿರ ಚದರಡಿ ಜಾಗ, ಮಾಯ ಕೊಂಡದಲ್ಲಿದ್ದ ಜಮೀನು, ಭರಮ ಸಾಗರದ ಪಕ್ಕದಲ್ಲಿನ ಕಸವನಹಳ್ಳಿ ಗ್ರಾಮದ 6 ಎಕರೆ ಜಾಗ ಸೇರಿ ಒಟ್ಟಾರೆ ರೂ 95 ಕೋಟಿ ಮೌಲ್ಯದ ಮಠದ ಆಸ್ತಿಯನ್ನು ಶರಣರು ಮಾರಾಟ ಮಾಡಿದ್ದಾರೆ’ ಎಂದು ದೂರಿದರು.

‘ಮಠದ ಆಸ್ತಿಯನ್ನು ಸರ್ಕಾರ ಖರೀದಿಸಿರುವ ವಿಷಯ ವಿವಾದಕ್ಕೆ ಒಳಗಾಗಿದ್ದು, ಈ ಕಾರಣ ಈ ಆಸ್ತಿ ಯನ್ನು ಯಾವ ಕಾರಣಕ್ಕೂ ಸಾರ್ವ ಜನಿಕರು ಖರೀದಿಸಬಾರದು. ಮಠದ ಆಸ್ತಿ ಸಾರ್ವಜನಿ­ಕವಾಗಿದ್ದು, ಅದನ್ನು ಸರ್ಕಾರ ಹಿಂದಿರುಗಿಸಬೇಕು’ ಎಂದರು.

‘ಗದ್ದುಗೆಯನ್ನೂ ಬಿಡಲಿಲ್ಲ’
ದಾವಣಗೆರೆಯ ಜಯದೇವ ಸ್ವಾಮೀಜಿ ಗದ್ದುಗೆ ಜಾಗವನ್ನು ಕೂಡ ಅಡವಿಟ್ಟು ರೂ 21 ಕೋಟಿ ಸಾಲ ಮಾಡುವ ಅವಶ್ಯಕತೆ ಏನಿತ್ತು? ಶರಣರು ಮಠದ ಆಸ್ತಿ ಉಳಿಸಬೇಕೇ ಹೊರತು ಕಳೆಯಬಾರದು.
– ಎಸ್‌.ಕೆ.ಬಸವರಾಜನ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT